ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮನೆಯಂಗಳದಲ್ಲಿ 7 ಅಡಿ ಉದ್ದದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ‌ ಕಾಡಿಗೆ ಬಿಟ್ಟ ಉರಗ ಪ್ರೇಮಿಗಳು 

ಮನೆಯಂಗಳದಲ್ಲಿ 7 ಅಡಿ ಉದ್ದದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ‌ ಕಾಡಿಗೆ ಬಿಟ್ಟ ಉರಗ ಪ್ರೇಮಿಗಳು 

Fri, 19 Jul 2024 07:27:40  Office Staff   SO News

ಭಟ್ಕಳ ಕರಾವಳಿ ಭಾಗದಲ್ಲಿ ಮಳೆಯು  ಅಬ್ಬರಿಸುತ್ತಿದೆ. ಮಳೆಯಿಂದಾಗಿ ಕಾಡಿನಿಂದ ಮನೆಗಳತ್ತ ಹಾವುಗಳು ಬರುತ್ತಿದ್ದು ತಾಲೂಕಿನ ಮುಟ್ಟಳಿ ಪಂಚಾಯತ್ ವ್ಯಾಪ್ತಿಯ ಕೃಷ್ಣಮೂರ್ತಿ ಶೆಟ್ಟಿ ಎನ್ನುವವರ ಮನೆಯಂಗಳದಲ್ಲಿ ಸುಮಾರು 7 ಅಡಿ ಉದ್ದದ  10ರಿಂದ 20 ಕೆಜಿಗೂ ಅಧಿಕ ತೂಕವಿರುವ ಹೆಬ್ಬಾವೊಂದು ಪತ್ತೆಯಾಗಿದ್ದು,ಉರಗ ಪ್ರೇಮಿಗಳು ಸುರಕ್ಷಿತವಾಗಿ ಹೆಬ್ಬಾವು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟ ಘಟನೆ ನಡೆದಿದೆ.

ಮನೆಯಂಗಳದಲ್ಲಿ ನೋಡಿದ ಈ ಬೃಹದಾಕಾರದ ಹೆಬ್ಬಾವು ನೋಡಿ ಮನೆಯವರು ಮತ್ತು ಅಕ್ಕಪಕ್ಕದವರ ಆತಂಕಕ್ಕೆ ಕಾರಣವಾಗಿತ್ತು,ಹಾವನ್ನು ರಕ್ಷಿಸುವಂತೆ ಮನೆ ಮಾಲೀಕರಾದ ಕೃಷ್ಣಮೂರ್ತಿ ಶೆಟ್ಟಿ ಅವರು ಸ್ಥಳೀಯ ಉರಗ ಪ್ರೇಮಿ ಒಬ್ಬರಿಗೆ ದೂರವಾಣಿಯ ಮೂಲಕ ಸಂಪರ್ಕಿಸಿದ್ದು, ಸ್ಥಳಕ್ಕೆ ಆಗಮಿಸಿದ‌ ಉರಗ ಪ್ರೇಮಿ ಗಳಾದ ರಾಘ ನಾಯ್ಕ ಮುಟ್ಟಳಿ ಹಾಗೂ‌ ಮಾದೇವ ನಾಯ್ಕ ಪುರವರ್ಗ ಅವರು ಸ್ಥಳೀಯರ ಸಹಕಾರದೊಂದಿಗೆ ಮನೆಯ ಪಕ್ಕದಲ್ಲಿ ಇದ್ದ ಕಂಪೌಂಡ್ ಒಂದರಲ್ಲಿ ಅಡಗಿಕೊಂಡಿದ್ದ ಹೆಬ್ಬಾವನ್ನು ಪ್ರಯಾಸ ಪಟ್ಟು ಹಾವಿನ ಬಾಲ ಹಿಡಿದು, ನಿಧಾನವಾಗಿ ಹೆಬ್ಬಾವನ್ನು ಮೇಲೆತ್ತುತ್ತ ಕಂಪೌಂಡ್ ಸಂದಿ ಯಲ್ಲಿ ಹೆಬ್ಬಾವು ಮತ್ತೆ ಮತ್ತೆ ತಪ್ಪಿಸಿಕೊಳ್ಳಲು ಕೊಳ್ಳುತ್ತಿದ್ದು ಅದಕ್ಕೆ ಅವಕಾಶ ನೀಡದ ರಾಘ ನಾಯ್ಕ,ಹಾಗೂ ಮಾದೇವ ನಾಯ್ಕ ಸುಮಾರು ಅರ್ಧ ಗಂಟೆ ಕಾಲ‌ ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.


Share: